ಈಗಾಗಲೇ ತಾವು ಈ ಸಮಿತಿಯಪೆಗೆ ಪಾತ್ರರಾಗಿದ್ದಿರಿ ಇದಕ್ಕಾಗಿ ತಮಗೆ ಅನಂತ ಕೃತಜ್ಞೆತೆಗಳು. ಈಗ ನಮ್ಮ ಸಮಾರಂಭಗಳಲ್ಲಿ ಅತಿಥಿ, ಕಲಾವಿದ, ಪ್ರಶಸ್ತಿಪುರಸ್ಕೃತ, ಪ್ರತಿನಿಧಿ ಗಳಾಗಿ ಭಾಗವಹಿಸಿ ಸಮಿತಿಯ ಎಲ್ಲ ಸಮಾರಂಭಗಳು ಯಶಸ್ವಿಯಾಗಲು ಕಾರಣರಾಗಿ ಪೂಜ್ಯರ ಕೃಸಮಿತಿಯು ತಮ್ಮನ್ನೂ ಒಳಗೊಂಡಂತೆ ತಮ್ಮೂರಿನಲ್ಲಿ ಇರುವ ಪೂಜ್ಯರ ಅಭಿಮಾನಿ ಭಕ್ತರೆಲ್ಲಗೂ ಸಮಿತಿಯ ದಶಮಾನೋತ್ಸವ ಮತ್ತು ಪೂಜ್ಯ ಗುರು ಪುಟ್ಟರಾಜರ ಜನ್ಮ ಶತಮಾನೋತ್ಸವ ಆಚರಣೆಯ ಸುವರ್ಣ ಸೇವಾಭಾಗ್ಯ ಕಲ್ಪಿಸಲು ಮುಂದಾಗಿ ತಮ್ಮನ್ನು ಈ ಮೂಲಕ ಸಂಪರ್ಕಿಸುತಿದ್ದೇವೆ. ತಾವು ಸಕ್ರೀಯವಾಗಿ ಪಾಲ್ಗೊಳ್ಳುವ ವಿಶ್ವಾಸವನ್ನೂ ಹೊಂದಿದ್ದೇವೆ. ಕೆಲವರು ಪೂಜ್ಯರನ್ನು ನೋಡಿರಬಹುದು ನೋಡದೇ ಇರಬಹುದು ಆದರೆ ಪೂಜ್ಯರ ವೆಕ್ತಿತ್ವದ ಬಗ್ಗೆ ಸಾಧನೆ ಸಿಧ್ಧಿಯ ಬಗ್ಗೆ ಕೇಳದೇ ಇರಲಾರರು. ಪೂಜ್ಯರು ಸಮಸ್ತ ಮನುಕುಲದ ಪ್ರಾತಿನಿಧಿಕ ವ್ಯಕ್ತಿಯಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದವರು. ಇಂತಹ ವ್ಯಕ್ತಿ ಮನುಕುಲದ ಇತಿಹಾಸದಲ್ಲಿ ಹಿಂದೆ ಇರಲಿಲ್ಲ ಮುಂದೆಸಿಗುವದೂ ಇಲ್ಲ. ಇದು ನನ್ನ ಪಾಲಿನ ಸತ್ಯ. ಇಂತಹ ಮಹಾ ಮೇರು ಚೇತನ ನಮ್ಮೊಂದಿಗಿಲ್ಲ. ಅವರ ಸಾಧನೆ ನಮ್ಮೊಂದಿಗಿವೆ. ಪೂಜ್ಯರ ಸಾಧನೆಯ ದರ್ಶನ ಮುಂದಿನ ಪೀಳಿಗೆ ನೋಡಬೇಕು ಮಾತನಾಡಬೇಕು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಸಮಿತಿ 2014-2015 ರ ಸಾಲಿನಲ್ಲಿ ವರ್ಷ ಪೂರ್ತಿ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಹನ್ನೆರಡು ಅದ್ದೂರಿ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದೆ. ಆಯ್ದ ಹನ್ನೆರಡು ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯು ಒಂದು. ನಡೆದಾಡುವ ದೇವರೆಂದೇ ಖ್ಯಾತರಾಗಿ ಈ ನೆಲದ ನಕ್ಷತ್ರವಾಗಿ ಮಿನುಗಿ ಮರೆಯಾಗಿ ಹೋದರು ಕೂಡಾ ಗುರು ಪೂಜ್ಯ ಪುಟ್ಟರಾಜರು ನಮ್ಮ ನಿಮ್ಮೆಲ್ಲರ ಹೃದಯ ಗದ್ದುಗೆಯಲ್ಲಿ ಶಾಶ್ವತ ಸ್ಥಾನ ಹೊಂದಿದ್ದಾರೆ.ಎಲ್ಲರು ಸೇರಿ ಪೂಜ್ಯರ ಜನ್ಮ ಶತಮಾನೋತ್ಸವ ಸಂಭ್ರಮದಿಂದ ಆಚರಿಸೋಣ ಗುರು ಕೃಪೆಗೆ ಪಾತ್ರರಾಗೋಣ.
------------------------------------------------------------------------------------------------------------
ಸಹಕರಿಸುವುದು ಹೇಗೆ
ಈ ಸಮಿತಿಯ ಯಾವುದಾದರು ಒಂದು ಸದಸ್ಯತ್ವ ಪಡೆಯುವುದು,
ತಮ್ಮ ಆಪ್ತಮಿತ್ರರನ್ನು ಸದಸ್ಯರನ್ನಾಗಿ ಮಾಡುವುದು.
ಶತಮಾನೋತ್ಸವ ಆಚರಣೆಯನಾಯಕತ್ವ ವಹಿಸಿಕೊಂಡು ಸಕ್ರೀಯವಾಗಿ ಭಾಗವಹಿಸುವುದು,
ಪ್ರಾಯೋಜಕರನ್ನು ಮತ್ತು ದಾನಿಗಳನ್ನು ಒದಗಿಸುವದು.
------------------------------------------------------------------------------------------------------------
ಡಾ.ಪಂ.ಪು.ಸೆವಾಸಮಿತಿಯ ಸದಸ್ಯತ್ವ ಶುಲ್ಕವಿವರ : ಸಾಮಾನ್ಯ 250/-ರೂಪಾಯಿ, ಆಜೀವ 500/-ರೂಪಾಯಿ, ದಾನಿಗಳು 1000/-ರೂಪಾಯಿ, ಪೋಷಕರು 2500/-ರೂಪಾಯಿ, ಮಹಾಪೋಷಕರು 5000/-ರೂಪಾಯಿಗಳುಮಾತ್ರ. ನಿಗದಿಪಡಿಸಿದ ಸದಸ್ಯತ್ವ ಅರ್ಜಿ ನಮೂನೆಗಾಗಿ ಕಲಾಲೋಕ ಗದಗ ಹೆಸರಿಗೆ ಡಿ.ಡಿ.ಅಥವಾ ಚಕ್ ಕಳುಹಿಸಿ ಅರ್ಜಿ ನಮೂನೆ ಪಡೆಯಬಹುದು. ವಿಳಾಸ : ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಶ್ರೀಗಿರಿ ನಿವಾಸ ಪಂಚಾಕ್ಷರಿ ನಗರ 4ನೆಯ ಅಡ್ಡರಸ್ತೆ ಪಂಚಾಕ್ಷರಿ ನಗರ ಪೋಸ್ಟ ಬಾಕ್ಸ ನಂ,49.ಗದಗ-582101.ಕಳುಹಿಸಿ ಕೊಡಬಹುದು.ಮಾಹಿತಿಗಾಗಿ ಕಾರ್ಯಾಲದ ವೇಳೆಯಲ್ಲಿ (08372)220432 ಗೆ ಸಂಪರ್ಕಿಸಬಹುದು.ವಂದನೆಗಳೊಂದಿಗೆ ರಾಜ್ಯ ಸಂಚಾಲಕರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ